ಮಳವಳ್ಳಿ : ಆನ್ ಲೈನ್ ಮೂಲಕ ವ್ಯಕ್ತಿಯೊಬ್ಬರನ್ನು ಪರಿಚಯಿಸಿ ಕೊಂಡು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಬ್ಬಟ್ಟು ಲಾಭ ನೀಡುವುದಾಗಿ ನಂಬಿಸಿ ಸುಮಾರು 1ಕೋಟಿ 30 ಲಕ್ಷ ರೂ ಹಣವನ್ನು ವಂಚಿಸಿರುವ ಪ್ರಕರಣ ವೊಂದು ಮಂಡ್ಯ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ವಾಸಿ ಲೋಕೇಶ್ ಎಂಬುವರೇ ಹಣ ಕಳೆದು ಕೊಂಡ ವರಾಗಿದ್ದು ಲೋಟೋಸ್ 365 ಎಂಬ ಕಂಪನಿಯ ಹೆಸರೇಳಿ ಕೊಂಡು ಅಪರಿಚಿತ ವ್ಯಕ್ತಿಯೋರ್ವ ಪರಿಚಯ ಮಾಡಿಕೊಂಡು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡುವುದಾಗಿ ನಂಬಿಸಿ ಒಂದು ಲಕ್ಷದ 30 ಸಾವಿರ ರೂ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ ಎಂದು ದೂರಿದ್ದಾರೆ.