ಕೊರಟಗೆರೆ: ತುಮಕೂರು: IMCT ಭೇಟಿ ಹಿನ್ನೆಲೆ ರಾಗಿ ಬೆಳೆ ಪ್ರದೇಶ ಪರಿಶೀಲಿಸಿದ ಜಿಲ್ಲಾಧಿಕಾರಿ
IMCT ಭೇಟಿ ಹಿನ್ನೆಲೆಯಲ್ಲಿ ತುಮಕೂರು ತಾಲ್ಲೂಕಿನ ಕೊರಾ ಗ್ರಾಮದಲ್ಲಿ ರಾಗಿ ಬೆಳೆ ಪ್ರದೇಶವನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಸಿಇಒ ಬಿ.ವಿ. ಅಶ್ವಿಜಾ ಪರಿಶೀಲಿಸಿದರು. ಬೆಳೆ ಪರಿಸ್ಥಿತಿ ಮತ್ತು ರೈತರ ಸಮಸ್ಯೆಗಳ ಮಾಹಿತಿ ಪಡೆದ ಅಧಿಕಾರಿಗಳು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.