ಡಿಸಿಎಂ ಡಿಕೆಶಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್ ಎಸ್ ಬೋಸ ರಾಜ್ ಅವರು, ಡಿಸಿಎಂ ಭೇಟಿಗೆ ನಾನು ಮತ್ತು ಮಾನ್ವಿ ಶಾಸಕರು ಬಂದಿದ್ವಿ, ಇದಾಗಲೇ ಅವರ ಗಮನಕ್ಕೆ ನಾನು ತಂದಿದ್ದೆ, ತುಂಗಭದ್ರಾ ಯೋಜನೆ ಡ್ಯಾಂ ಅಲ್ಲಿ ನೀರು, ಈಗ ನಿಲ್ಲಿಸುವಂತಹ ಪರಿಸ್ಥಿತಿಗೆ ಬಂದಿದೆ. ಬೆಳೆಗಳಿಗೆ ನೀರಿಲ್ಲ ಎಂದು ರೈತರು ಕೇಳ್ತಾ ಇದ್ದಾರೆ. ಕಳೆದ ವರ್ಷ ಒಂದು ಗೇಟ್ ಮುರಿದಿತ್ತು. ಕರ್ನಾಟಕ, ತೆಲಂಗಾಣ, ಆಂಧ್ರ ಸ್ಟೇಟ್ ಏನಿದೆ, ಆ ಬೋರ್ಡ್ ಅವರ ನಿರ್ಧಾರದಂತೆ ಈಗ, ಹೊಸ ಟೆಂಡರ್ ಅನ್ನು ಅವರು ಕರೆದಿದ್ದಾರೆ. ಹೊಸ ಗೇಟ್ ಅಳವಡಿಸೋ ಕಾರ್ಯ ಆಗಬೇಕಿದೆ, ಆ ನಿಟ್ಟಿನಲ್ಲಿ 32 ಗೇಟ್ ಸಹ ಬಂದ್ ಮಾಡಿದ್ದಾರೆ ಎಂದರು.