ಉಡುಪಿ: ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಪಂಚಾಶತ್ ಜನ್ಮ ವೈಭವ: ಅ.3 ಮತ್ತು 4ಕ್ಕೆ ವಿಶೇಷ ಕಾರ್ಯಕ್ರಮ
Udupi, Udupi | Oct 1, 2026 ಉಡುಪಿಯ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ 50ನೇ ಜನ್ಮದಿನದ ಪ್ರಯುಕ್ತ ಅಕ್ಟೋಬರ್ 3 ಮತ್ತು 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಠದ ವತಿಯಿಂದ ಮುಂದಿನ ಒಂದು ವರ್ಷದ ಕಾಲ ಗೋಸೇವೆ, ಅನ್ನದಾನ ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.