ಶಿವಮೊಗ್ಗ: ನಗರದ ಎನ್.ಟಿ ರಸ್ತೆಯ ಮನೆವೊಂದರಿಂದ ಬಾಲಕ ನಾಪತ್ತೆ, ಪತ್ತೆಗೆ ಪ್ರಕಟಣೆ
ಶಿವಮೊಗ್ಗ ನಗರದ ಎನ್ ಟಿ ರಸ್ತೆಯ ಬೈಪಾಸ್ನ ಒಂದನೇ ತಿರುಗಿನ ಮನೆ ಒಂದರಿಂದ ಬಾಲಕ ನಾಪತ್ತೆಯಾಗಿದ್ದಾನೆ ಕಿರಣ್ ಬ್ಯಾಟರಿ ಹಿಂಭಾಗದ ವಾಸಿಸುತ್ತಿದ್ದು ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವಂತಹ ಮೈನುದ್ದೀನ್ ಎಂಬುವವರ ಮಗ ರುಯಾನ್ ಸೋಮವಾರ ರಾತ್ರಿಯಿಂದ ಕಾಣೆಯಾಗಿದ್ದಾನೆ. ಈತನ ಬಗ್ಗೆ ಸಂಬಂಧಿಕರು ಸ್ನೇಹಿತರ ಬಳಿ ಎಲ್ಲೆಡೆ ವಿಚಾರಿಸಿದರೆ ಸಹ ಇದುವರೆಗೆ ಸುಳಿವು ಸಿಕ್ಕಿಲ್ಲ. ಈತನ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ,ಕೂಡಲೇ ಹತ್ತಿರದ ಪೊಲೀಸ್ ಠಾಣೆಯನ್ನ ಸಂಪರ್ಕಿಸುವಂತೆ ಪ್ರಕಟಣೆ ಮೂಲಕ ಮಂಗಳವಾರ ತಿಳಿಸಲಾಗಿದೆ.