ಶಿವಮೊಗ್ಗ: ಜುಲೈ 10ರಿಂದ ಗಾಜನೂರಿನ ತುಂಗಾ ಬಲದಂಡೆ-ಎಡದಂಡೆಯಿಂದ ಕಾಲುವೆ ನೀರು ಬಿಡುಗಡೆ
ಶಿವಮೊಗ್ಗ ಗಾಜನೂರಿನ ತುಂಗಾ ಬಲದಂಡೆ ಮತ್ತು ಎಡದಂಡೆ ಕಾಲುವೆಯಲ್ಲಿ 2024-25 ನೇ ಸಾಲಿನ ಮುಂಗಾರು ಬೆಳೆಗೆ ಜು.10 ರಿಂದ ನೀರು ಹರಿಸಲಾಗುತ್ತದೆ ಮಂಗಳವಾರ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ. ಅಚ್ಚುಕಟ್ಟು ಪ್ರದೇಶದ ರೈತರು, ಸಾರ್ವಜನಿಕರು, ಜಾನುವಾರುಗಳೊಂದಿಗೆ ಮುಖ್ಯನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ನಿಗಮದ ಕಾರ್ಯಪಾಲಕ ಇಂಜಿನಿಯರ್ ಅವರು ಹೇಳಿದ್ದಾರೆ