ಶಿವಮೊಗ್ಗ: ಶಿಕಾರಿಪುರದಲ್ಲಿ ಸಾಂಕ್ರಮಿಕ ರೋಗದಿಂದ ಮಗು ಸಾವು ಪ್ರಕರಣ, ಮಗುವಿನ ಕುಟುಂಬಸ್ಥರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಂತ್ವನ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಕಳೆದ ಶನಿವಾರ ಸಾಂಕ್ರಮಿಕ ರೋಗದಿಂದ 9 ತಿಂಗಳ ಮಗು ಸಾವನಪ್ಪಿತ್ತು ಮೃತಪಟ್ಟ ಮಗುವಿನ ಮನೆಗೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಅವರು ಭೇಟಿ ನೀಡಿದರು. ಶಿಕಾರಿಪುರ ಪಟ್ಟಣದಲ್ಲಿರುವ ಮಗುವಿನ ಮನೆಗೆ ಭೇಟಿ ನೀಡಿದ ಅವರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಮಗುವನ್ನು ಕಳೆದುಕೊಂಡ ತಂದೆ ತಾಯಿಗೆ ಧೈರ್ಯ ತುಂಬ ಕೆಲಸವನ್ನು ಸಹ ಬಿ.ವೈ.ವಿಜಯೇಂದ್ರ ಅವರು ಮಾಡಿದ್ದಾರೆ.