ಮಂಗಳೂರು: ಅಂಬೇಡ್ಕರ್ ಕೈಗಾರಿಕಾ ಪಾರ್ಕ್ಗೆ 50 ಎಕರೆ ಭೂಮಿ ಮಂಜೂರಾತಿಗೆ ಮನವಿ
ಮಂಗಳೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ 50 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಎಸ್ಸಿ-ಎಸ್ಟಿ ಸಮುದಾಯದ ಉದ್ಯೋಗಾವಕಾಶ ಮತ್ತು ಸಬಲೀಕರಣದ ಉದ್ದೇಶದಿಂದ ಈ ಬೇಡಿಕೆಯನ್ನು ಇಡಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲೂ ಅವಕಾಶ ಕಲ್ಪಿಸಲು ಆಗ್ರಹಿಸಲಾಗಿದೆ.