ಇಂಡಿ: ವಿಜಯಪುರ: ಕಬ್ಬಿಗೆ 3600 ರೂ. ಬೆಲೆಗೆ ಆಗ್ರಹ, ಹಿರೇಬೆನುರ ಸಕ್ಕರೆ ಕಾರ್ಖಾನೆ ಮುಂದೆ ರೈತರ ಪ್ರತಿಭಟನೆ
ವಿಜಯಪುರದ ಇಂಡಿ ತಾಲೂಕಿನ ಹಿರೇಬೆನುರ ಸಕ್ಕರೆ ಕಾರ್ಖಾನೆಗೆ ಕಬ್ಬಿಗೆ 3600 ರೂಪಾಯಿ ದರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಖಾನೆ ಬಾಗಿಲಿಗೆ ಮುಳ್ಳುಕಂಟಿ ಇಟ್ಟು ಪ್ರತಿಭಟಿಸಿದ ರೈತರು, ದರ ನಿಗದಿ ಮಾಡದಿದ್ದರೆ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.