ಹುಕ್ಕೇರಿ: ಬೆಳಗಾವಿ: ಹತ್ತಿ ಹೊಲಕ್ಕೆ ಎತ್ತು ನುಗ್ಗಿದ್ದಕ್ಕೆ ಕೊಡಲಿಯಿಂದ ಹಲ್ಲೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಎತ್ತುಗಳು ಹತ್ತಿ ಹೊಲಕ್ಕೆ ನುಗ್ಗಿದ ವಿಚಾರಕ್ಕೆ ಜಮೀನು ಮಾಲೀಕರು ಮತ್ತು ಇತರರು ಪ್ರಭು ಪಾಟೀಲ ಎಂಬುವವರ ಮೇಲೆ ಕೊಡಲಿ, ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪ್ರಭು ಪಾಟೀಲ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.