ಕೊಲ್ಹಾರ: ವಿಜಯಪುರದಲ್ಲಿ ಜಮೀನು ವಿವಾದ: ಇಬ್ಬರ ಹತ್ಯೆ, ಆರೋಪಿಗಳ ಪತ್ತೆಗೆ ಪೊಲೀಸರ ವಿಶೇಷ ತಂಡ ರಚನೆ
ವಿಜಯಪುರ ಜಿಲ್ಲೆಯ ತಡಲಗಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆ ಇಬ್ಬರ ಕೊಲೆಯಾಗಿದೆ. ಸಾಲೋಟಗಿ ಮತ್ತು ಮೇಟಿ ಕುಟುಂಬದ ನಡುವೆ ನಡೆದ ಜಮೀನು ವಿವಾದವೇ ಈ ಕೃತ್ಯಕ್ಕೆ ಕಾರಣ ಎಂದು ಎಸ್.ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.