ರಾಮನಗರ: ಗಾಂಧಿನಗರದ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಪ್ರಗತಿಯಲ್ಲಿ
ಗಾಂಧಿನಗರದ 3ನೇ ವಾರ್ಡಿನಲ್ಲಿರುವ ಶ್ರೀ ಆದಿಶಕ್ತಿ ಅಮ್ಮನವರ ಹಳೆಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಶಾಸಕ ಹೆಚ್. ಎ. ಇಕ್ಬಾಲ್ ಹುಸೇನ್ ಅವರ ಧರ್ಮಪತ್ನಿಯವರ ಸಂಪೂರ್ಣ ಸ್ವಂತ ಖರ್ಚಿನಲ್ಲಿ ದೇವಾಲಯದ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿದೆ.