ಬೆಂಗಳೂರು ಉತ್ತರ: ಕೆಎಸ್ಆರ್ ರೈಲ್ವೇ ನಿಲ್ದಾಣದಿಂದ, ರಾಗಿಗುಡ್ಡ ಮೆಟ್ರೋ ಸ್ಟೇಷನ್ ಕಡೆಗೆ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು - ಬೆಳಗಾವಿ ವಂದೇ ಭಾರತ್ ಹಾಗೂ ಅಮೃತ್ ಸರ್ ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ರೈಲು, ನಾಗಪುರ್ - ಪುಣೆ ರೈಲು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 11:40 ರ ಸುಮಾರಿಗೆ ಕೆಎಸ್ ಆರ್ ರೈಲ್ವೇ ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದ್ದು, ಸದ್ಯ ಜಯನಗರದ ರಾಗಿಗುಡ್ಡದ ಕಡೆಗೆ ತಮ್ಮ ಪ್ರಯಾಣ ಬೆಳೆಸಿದ್ದಾರೆ. ರಾಗಿಗುಡ್ಡದಲ್ಲಿ 11:45 ರಿಂದ 12:50 ರ ವರೆಗೆ ಪ್ರಧಾನಿ ಮೋದಿ ಇರಲಿದ್ದು ಮೆಟ್ರೋ ಯೆಲ್ಲೋ ಲೈನ್ ಗೆ ಚಾಲನೆ ನೀಡಲಿದ್ದಾರೆ. ನಂತರ ರಾಗಿಗುಡ್ಡದಿಂದ ಕೋನಪ್ಪನ ಅಗ್ರಗಾರಕ್ಕೆ ಮೆಟ್ರೋ ಮೂಲಕ ಪ್ರಯಾಣ ಮಾಡಿ ಪರಿಶೀಲನೆ ಮಾಡಲಿದ್ದಾರೆ.