ಯಾದಗಿರಿ ನ್ಯೂಸ್ ಫಲಶ್ರುತಿ
ಗಣೇಶ ವಿಸರ್ಜನಾ ಕೊಳದಲ್ಲಿ ಗಣೇಶ ಮೂರ್ತಿಗಳು ಕರಗದೆ ಉಳಿದಿರುವ ಕುರಿತು ವರದಿ; ತಕ್ಷಣ ಕ್ರಮ ಕೈಗೊಂಡ ನಗರಸಭೆ ಅಧಿಕಾರಿಗಳು
ಯಾದಗಿರಿ: ನಗರದ ಲಂಬಿನಿ ಗಾರ್ಡನ್ ಹೊರಗಡೆ ಇರುವ ಗಣೇಶ ವಿಸರ್ಜನಾ ಕೊಳದಲ್ಲಿ ವಿಸರ್ಜನೆ ಮಾಡಲಾಗಿದ್ದ ಗಣೇಶ ಮೂರ್ತಿಗಳು ಕರಗದೆ ಹಾಗೆಯೇ ಉಳಿದಿರುವ ಕುರಿತು ಯಾದ್ಗೀರ್ ನ್ಯೂಸ್ ವರದಿ ಪ್ರಕಟಿಸಿತ್ತು.
ವರದಿ ಗಮನಕ್ಕೆ ಬಂದ ಬೆನ್ನಲ್ಲೇ ಯಾದಗಿರಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಸಮಸ್ಯೆಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಗಣೇಶ ವಿಸರ್ಜನಾ ಕೊಳದಲ್ಲಿ ಮೂರ್ತಿಗಳು ಕರಗದೆ ಉಳಿದಿರುವುದರಿಂದ ಸಾರ್ವಜನಿಕರು ಹಾಗೂ ಭಕ್ತರಲ್ಲಿ ಉಂಟಾಗಿದ್ದ ಆತಂಕದ ಬಗ್ಗೆ ಯಾದಗಿರಿ ನ್ಯೂಸ್ ವರದಿ ಮೂಲಕ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಇದೀಗ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಯಾದಗಿರಿ ನ್ಯೂಸ್ — ವರದಿ ಮಾತ್ರವಲ್ಲ, ಫಲಶ್ರುತಿಯೂ ನಮ್ಮ ಗುರಿ.
“ನಿಮ್ಮ ಸಮಸ್ಯೆ ನಮ್ಮ ಸುದ್ದಿ… ನಿಮ್ಮ ಧ್ವನಿ ನಮ್ಮ ವೇದಿಕೆ.”
#YadgirNews #Yadgir #ಫಲಶ್ರುತಿ #GaneshVisarjan #YadgirCity #CityMunicipality #PublicIssue #ಜನರಧ್ವನಿ
Yadgir, Yadgir | Oct 1, 2026