ಮಂಗಳೂರು: ಬಂಟ್ವಾಳ ವಿದ್ಯಾನಿಕೇತನ ಶಾಲಾ ಮಕ್ಕಳ ಕೃಷಿ ಕಾಯಕ: ಭತ್ತದ ಕಟಾವಿನಲ್ಲಿ ಭಾಗಿ
ಬಂಟ್ವಾಳದ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಮಕ್ಕಳು ಕೃಷಿಯ ಅನುಭವ ಪಡೆಯಲು ಭತ್ತದ ಕಟಾವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮೂರು ತಿಂಗಳ ಹಿಂದೆ ನಾಟಿ ಮಾಡಿದ ಭತ್ತ ಈಗ ಕಟಾವಿಗೆ ಬಂದಿದ್ದು, ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳು ಕಣ್ಣಾರೆ ಕಂಡು ತಿಳಿದುಕೊಂಡರು.