ಸಿದ್ಧಾಪುರ: ಹಾರೆಕೊಪ್ಪ, ಹೊಸಕೊಪ್ಪದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ
ಸಿದ್ದಾಪುರ : ಎಸ್‌ಎಸ್‌ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ತಾಲೂಕಿನ ಇಬ್ಬರು ವಿದ್ಯಾರ್ಥಿನೀಯರನ್ನು ಶಾಸಕ ಭೀಮಣ್ಣ ನಾಯ್ಕ ಭಾನುವಾರ ಸನ್ಮಾನಿಸಿ ಗೌರವಿಸಿದರು. ಸಿದ್ದಾಪುರದ ಎಸ್.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದೀಕ್ಷಾ ಗೌಡ ಇವಳ ಹೊಸಕೊಪ್ಪದ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಬಾಲಕಿಯ ಸಾಧನೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಅದೇ ರೀತಿ ಸಿದ್ದಾಪುರ ತಾಲೂಕಿನ ಕವಂಚೂರಿನ ಕಿತ್ತೂರ ರಾಣಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಸುರೇಶ ಒಕ್ಕಲಿಗ ಇವಳ ಹಾರೆಕೊಪ್ಪದ ಮನೆಗೆ ಭೇಟಿ ನೀಡಿ ಬಾಲಕಿಗೆ ಸನ್ಮಾನಿಸಿ ದರು.