ಚಿತ್ರದುರ್ಗ: ವಾರ್ಡ್ ನಂ 1, 2, 3, 4ರ ನಿವಾಸಿಗಳಿಗಾಗಿ ವಿಶೇಷ ಕುಂದುಕೊರತೆ ಸಭೆ
ಚಿತ್ರದುರ್ಗ ನಗರದ ವಾರ್ಡ್ 1 ರಿಂದ 4ರ ನಿವಾಸಿಗಳಿಗಾಗಿ ನವೆಂಬರ್ 14ರಂದು ಬೆಳಗ್ಗೆ 10.30ಕ್ಕೆ ಏಕನಾಥೇಶ್ವರಿ ಪಾದಗುಡಿ ಆವರಣದಲ್ಲಿ ಕುಂದುಕೊರತೆ ಸಭೆ ನಡೆಯಲಿದೆ. ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.