ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಕೋ0ಡೆನ್ನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಎಂಬುವವರ ಹೊಲದ ಪಕ್ಕದಲ್ಲಿ ಅವರದೇ ಆದ ಅಂದಾಜು 30x30 ಅಡಿ ವಿಸ್ತಾರವಾದ 80 ಅಡಿ ಆಳದ ತೇರೆದ ನೀರಿಲ್ಲದ ಮೆಟ್ಟಿಲುಗಳೀಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ನಾಯಿಯು ಕಾಲು ಜಾರಿ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ದೂರವಾಣಿಗೆ ಕರೆ ಮಾಡಿ ತಿಳಿಸಿದರು. ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 80 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 03:00 ಮುವರು ಘಂಟೆಗಳ ಕಾಲ ಶ್ರಮವಹಿಸಿ ಅಧಿಕಾರಿ ಹಾಗು ಸಿಬ್ಬಂದಿಯವರುಗಳು ಬುಟ್ಟಿ ಹಾಗು ಚಿಲಗಳ ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ
ನಾಯಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ. ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಕೋ0ಡೆನಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿಗೆ ಯಶಸ್ವಿ ರಕ್ಷಣಾ ಕಾರ್ಯಚರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯರಾದ ಹಾಲಸಿದ್ದ ವಸಂತ ಮೇತ್ರಿ ನೇತ್ರತ್ವದಲ್ಲಿ ಪ್ರಮುಖ ಅಗ್ನಿಶಾಮಕರವರಾದ ರವೀಂದ್ರ ಸಂಗಮ, ಅಗ್ನಿಶಾಮಕ ಚಾಲಕರಾದ ಮಡಿವಾಳರ ಬಸವರಾಜ, ನಾಗಪ್ಪ ಶಿವಾಪುರ,ಹಾಗೂ ಅಗ್ನಿಶಾಮಕರಾದ ಮಲ್ಲಿಕಾರ್ಜುನ ಕಾಡಪ್ಪನವರ ದತ್ತಾತ್ರೇಯ,ಬೋರಗಾವಿ ಭಾಗವಹಿಸಿದ್ದರು.ಅಲ್ಲದೇ ಸಾರ್ವಜನಿಕರು ಸಹ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದರು.
Yadgir, Yadgir | Oct 23, 2026