ಸಿಂದಗಿ: ಆಲಮೇಲದಲ್ಲಿ ನವೆಂಬರ್ 14ರಂದು ಆರ್ಎಸ್ಎಸ್ ಪಥಸಂಚಲನ: ಪಾಲ್ಗೊಳ್ಳಲು ಮಾಜಿ ಶಾಸಕರ ಮನವಿ
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಇದೇ ನವೆಂಬರ್ 14ರಂದು ಆರ್ಎಸ್ಎಸ್ ವತಿಯಿಂದ ಪಥಸಂಚಲನ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಸಿಂದಗಿಯಲ್ಲಿ ಮಾತನಾಡಿದ ಮಾಜಿ ಶಾಸಕ ರಮೇಶ ಭೂಸನೂರು, ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಮತ್ತು ರಾಷ್ಟ್ರಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.