ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ ಸೈನಿಕರಿಗೆ ಯಾವ ಜಾತಿಯಿದೆ. ಭಾರತ ಅನ್ನೋ ಪದ ಮಾತ್ರ ಇರೋದು, ಸೈನಿಕರಲ್ಲಿ ಜಾತಿಯನ್ನು ಹುಡುಕಬೇಡಿ, ರಾಹುಲ್ ಗಾಂಧೀಯವರೇ ನೀವೂ ಇಟಲಿಯಾ ಇಂಡಿಯಾನಾ ಅಂತಾ ಮೊದಲು ಹೇಳು, ಸೈನಿಕರಲ್ಲಿ ಜಾತಿ ಹುಡುಕುತ್ತೀರಾ ಇದೇನಾ ನಿಮ್ಮ ಸಂಸ್ಕೃತಿ. ಬಿಹಾರ ಚುನಾವಣೆಗೂ ಸೈನಿಕರ ಚುನಾವಣೆಗೂ ಏನು ಸಂಬಂಧ ಒಬ್ಬ ವಿರೋಧ ಪಕ್ಷದ ನಾಯಕ ಈ ರೀತಿ ಮಾತನಾಡೋದು ಸರಿಯಾ ಹೇಳಿ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಲಿ ನಡೆಸಿದರು.