ರಾಯಚೂರಿನ ಮಹಾನಗರ ಪಾಲಿಕೆಯ ಆಸ್ತಿಗಳಾದ ಕೋಟೆ, ಕಂದಕ, ತೀನ್ ಕಂದೀಲ್ ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜು ಹೇಳಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದ ಕೋಟೆಯ ಹೊರಗಡೆ ಹಾಗೂ ಒಳಗಡೆ ವಾಸಮಾಡುವ ಮಾಲೀಕರಿಗೆ ಇ-ಖಾತ ವಿತರಿಸುವ ಕುರಿತು ಸಂಬಂಧಿಸಿದ 6-8 ತಿಂಗಳಿನಿಂದ ಚರ್ಚೆ ಮಾಡಲಾಗುತ್ತಿದೆ. ಇದಕ್ಕಾಗಿ ಇಲಾಖೆಯ ಕಾನೂನು ರೀತಿಯಲ್ಲಿ ಹೇಗೆ ಪರಿಹಾರ ನೀಡಬೇಕು ಎಂದು ಚರ್ಚೆ ನಡೆಸಲಾಗುತ್ತಿದೆ ಎಂದರು.