ಬೆಳಗಾವಿ: KPSC ನೇಮಕಾತಿಯಲ್ಲಿ ಅಕ್ರಮದ ಆರೋಪ: ತನಿಖೆಗೆ ಒತ್ತಾಯಿಸಿದ ಅಭ್ಯರ್ಥಿಗಳು
KPSC ನಡೆಸಿದ AC-SAAD ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಬೆಳಗಾವಿಯ ಅಭ್ಯರ್ಥಿ ಚೇತನ ಚೋಪಡೆ ಆರೋಪಿಸಿದ್ದಾರೆ. 17 ತಿಂಗಳ ಫಲಿತಾಂಶ ವಿಳಂಬ, ಅಂಕಪಟ್ಟಿ ಮತ್ತು ವರ್ಗವಾರು ವಿವರ ಪ್ರಕಟಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಅವಧಿಯ ನೇಮಕಾತಿಗಳ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.