ಶಿರಸಿ: ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ನಾಲ್ಕು ಹೆಚ್ಚುವರಿ ಕೋರ್ಸ್ : ಶಾಸಕರ ಕಾರ್ಯಾಲಯದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾಹಿತಿ
ಶಿರಸಿ : ಶಿರಸಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಾಲ್ಕು ಹೆಚ್ಚುವರಿ ಕೋರ್ಸಗಳನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ನಗರದ ಶಾಸಕರ ಕಾರ್ಯಾಲಗದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2025–26ನೇ ಸಾಲಿಗೆ ಪದವಿ ಕಲಾ ವಿಭಾಗಕ್ಕೆ ನಾಲ್ಕು ಹೊಸ ಸಂಯೋಜಿತ ವಿಷಯಗಳು ಮಂಜೂರಾಗಿದ್ದು, 200 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದರು.