ಶಿಕಾರಿಪುರ: ಶಿರಾಳಕೊಪ್ಪ ಪಟ್ಟಣದಲ್ಲಿ ಸ್ವೀಪ್ ಸಮಿತಿ ಪುರಸಭೆ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ
ಶಿರಾಳಕೊಪ್ಪ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ,ಪುರಸಭೆ ಶಿರಾಳಕೊಪ್ಪ ಇವರ ವತಿಯಿಂದ ಬುಧವಾರ ಬೆಳಗ್ಗೆ 11 ಗಂಟೆಗೆ ಮತದನಾ ಜಾಗೃತಿ ಕಾರ್ಯಕ್ರಮವನ್ನು ಮತಗಟ್ಟೆ ಸಂಖ್ಯೆ 67- 68 ರಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ಜಯಣ್ಣ ಚಾಲನೆ ನೀಡಿ ಮಾತನಾಡಿ ಭಾರತ ಚುನಾವಣಾ ಆಯೋಗ ನಡೆಸುವ ದೇಶದ ಅತೀ ದೊಡ್ಡ ಚುನಾವಣೆ ಲೋಕಸಭಾ ಚುನಾವಣೆಯಾಗಿದ್ದು ಪ್ರತಿಯೊಬ್ಬ ಮತದಾರರು ಮತವನ್ನು ಮಾಡುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಮೇ.7 ರಂದು ನಡೆಯಲಿರುವ ಲೋಕದಲ್ಲಿ ಚುನಾವಣೆಗೆ ಮತದಾನ ನೋಂದಣಿಯಾಗಿರು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಸಿಬ್ಬಂದಿಗಳು ಇದ್ದರು