ರಾಯಚೂರು: 2419 ಮನೆಗಳನ್ನು ನಿರ್ಮಿಸಿ ಬಡವರಿಗೆ ಕೊಡುವುದು ಮಹತ್ತರ ಕಾರ್ಯ : ಸಚಿವ
ಜಿ+3 ಮಾದರಿಯಲ್ಲಿ ಅನುಮೋನೆಗೊಂಡು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಪ ಘಟಕ ಎ ಎಚ್ ಪಿ ಯೋಜನೆಯಡಿ ರಾಯಚೂರು ಮಹಾನಗರ ಪಾಲಿಕೆಗೆ 54ನೇ ಸಿಎಸ್ ಎಂಸಿಯಲ್ಲಿ, ಯರಮರಸ್ ಹತ್ತಿರದ ವಿಮಾನ ನಿಲ್ದಾಣ ಬಳಿಯಲ್ಲಿ ನಿರ್ಮಾಣ ಹಂತದಲ್ಲಿರುವ 2419 ವಸತಿ ಸಮುಚ್ಛಯದ ಸ್ಥಳಕ್ಕೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ ಅವರು ಡಿಸೆಂಬರ್ 3ರಂದು ಭೇಟಿ ನೀಡಿದರು. ವಸತಿ ಸಮುಚ್ಛಯ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಿ ಬಡಜನತೆಗೆ ವಿತರಿಸಲು ಕ್ರಮವಹಿಸುವಂತೆ ಸಚಿವರು ಸೂಚನೆ ನೀಡಿದರು.