ಬೆಂಗಳೂರು ಉತ್ತರ: ನನ್ನನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ದೊಡ್ಡ ಷಡ್ಯಂತ್ರ, ಪಿತೂರಿ ಇದೆ: ನಗರದಲ್ಲಿ ಕೆ.ಎನ್.ರಾಜಣ್ಣ
ಎಲ್ಲರಿಗೂ ಸಂಜೆಯ ನಮಸ್ಕಾರ ಮಾಜಿ ಸಚಿವನಾಗಿ ಮಾತಾಡುತ್ತಿದ್ದೇನೆ ಎಂದು ಭಾವುಕವಾಗಿ ಕೆ.ಎನ್ ರಾಜಣ್ಣ ಮಾತನಾಡಿದ್ದರು, ವಿಧಾನಸೌಧದಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾಜಿ ಸಚಿವ ಎಂದು ಕರೆಸಿಕೊಳ್ಭಲು ನನಗೆ ಸಂತೋಷ ಇದೆ, ಈ ಬಗ್ಗೆ ನಾನು ಸಿಎಂಗೆ ಧನ್ಯವಾದ ಅರ್ಪಿಸುವೆ. ಸಿಎಂ ಸ್ಟೇಟ್ಮೆಂಟ್ ಮಾಡಿಲ್ಲ, ಇದೆಲ್ಲ ಘಟನೆಗಳ ಹಿಂದೆ ಒಂದು ದೊಡ್ಡ ಪಿತೂರಿ, ಷಡ್ಯಂತ್ರ ಇದೆ, ಇದರ ಬಗ್ಗೆ ಕಾಲ ಬಂದಾಗ ತಿಳಿಸುವೆ, ರಾಹುಲ್ ಗಾಂಧಿ, ವೇಣುಗೋಪಾಲ್, ನಮ್ಮ ಅಧ್ಯಕ್ಷರಿಗೆ ತಪ್ಪು ಗ್ರಹಿಕೆ ನಿವಾರಣೆ ಮಾಡಲು ದೆಹಲಿಗೆ ಹೋಗುವೆ ಎಂದರು.