ಬಂಟ್ವಾಳ: ಬಂಟ್ವಾಳದಲ್ಲಿ ಬೈಕ್ ಇಎಂಐ ವಿಚಾರವಾಗಿ ತಂದೆ ಪ್ರಶ್ನಿಸಿದ್ದಕ್ಕೆ ಯುವಕ ಆತ್ಮಹತ್ಯೆ
ಬಂಟ್ವಾಳದ ಪಾಣೆಮಂಗಳೂರು ಗ್ರಾಮದ ರೆಂಗೇಲುವಿನಲ್ಲಿ 20 ವರ್ಷದ ಅಕಿಲೇಶ್ ಎಂಬ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೈಕ್ ಇಎಂಐ ಪಾವತಿಸದ ವಿಚಾರವಾಗಿ ತಂದೆ ಪ್ರಶ್ನಿಸಿದ ಬಳಿಕ ಈ ಘಟನೆ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.