ಬೆಂಗಳೂರು ಉತ್ತರ: ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಗಾಂಧಿ ಬಜಾರ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ, ಶಾಸಕ ಉದಯ್ ಗರುಡಾಚಾರ್ ಭಾಗಿ
ಬೆಂಗಳೂರಿನ ಬಸವನಗುಡಿ ಸಮೀಪವಿರುವ ಗಾಂಧಿ ಬಜಾರ್ ನಲ್ಲಿ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕರಾದ ಉದಯ್ ಗರುಡಾಚಾರ್ ಹಾಗೂ ಸ್ಥಳೀಯರು ಮೊಂಬತ್ತಿ ಹಿಡಿದು ಮುಖ್ಯ ರಸ್ತೆಗಳಲ್ಲಿ ಸಂಚರಿಸಿದರು. ಭಯೋತ್ಪಾದಕರ ಈ ಒಂದು ದಾಳಿ ದೇಶದ ಜನರ ರಕ್ತ ಕುಡಿಯುವಂತೆ ಮಾಡಿದೆ. ಹೀಗಾಗಿ ಪಾಪಿ ಪಾಕಿಸ್ತಾನಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಷ್ಟು ಬೇಗ ತಕ್ಕ ಉತ್ತರ ನೀಡಲಿದೆ ಎಂದು ಶಾಸಕರಾದ ಉದಯ್ ಗರುಡಾಚಾರ್ ಆಕ್ರೋಶ ಹೊರ ಹಾಕಿದರು