Public App Logo
Jansamasya
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Indore
Nda
School
Politics

ಸೂಪಾ: ಪಣಸೋಲಿ ಆನೆ‌ ಶಿಬಿರಕ್ಕೆ ಎರಡು ಆನೆಗಳ ಸೇರ್ಪಡೆ, ಆನೆಗಳನ್ನು ಸ್ವಾಗತಿಸಿದ ಶಾಸಕ ಆರ್.ವಿ.ದೇಶಪಾಂಡೆ

Supa, Uttara Kannada | Nov 28, 2025
ಜೋಯಿಡಾ : ತಾಲೂಕಿನ ಪಣಸೋಲಿ ಆನೆ ಶಿಬಿರಕ್ಕೆ ಮತ್ತೆರಡು ಆನೆಗಳು ಸೇರ್ಪಡೆಗೊಂಡಿದ್ದು, ಶುಕ್ರವಾರ ಸಂಜೆ 4:30 ಗಂಟೆ ಸುಮಾರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಅವರು ಹೂಮಾಲೆ ಹಾಕಿ ಬರಮಾಡಿಕೊಂಡರು. ಪಣಸೋಲಿ ಆನೆ ಶಿಬಿರಕ್ಕೆ 18 ವರ್ಷದ ಗಂಡಾನೆ ಮತ್ತೊಂದು 8 ವರ್ಷದ ಮರಿಯಾನೆಯ ಆಗಮನವಾಗಿದ್ದು, ಇದೀಗ ಪಣಸೋಲಿ ಆನೆ ಶಿಬಿರದಲ್ಲಿ ಸಂಭ್ರಮ‌ ಮನೆ ಮಾಡಿದೆ. ಈ ಸಂದರ್ಭದಲ್ಲಿ ವನ್ಯಜೀವಿ ಇಲಾಖೆಯ ನಿರ್ದೇಶಕ ನಿಲೇಶ ಶಿಂದೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ ಹಾಗೂ ವನ್ಯಜೀವಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.