ಮಡಿಕೇರಿ: ಅರಪಟ್ಟು: 5 ಲಕ್ಷ ರೂಪಾಯಿ ವೆಚ್ಚದ ನೂತನ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್. ಪೊನ್ನಣ್ಣ
ಮಡಿಕೇರಿ ತಾಲೂಕಿನ ಅರಪಟ್ಟುವಿನಲ್ಲಿ ಕುಲ್ಲಚಂಡ ಐನ್ ಮನೆಗೆ ಸಂಪರ್ಕ ಕಲ್ಪಿಸುವ 5 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.