ಮುಂಡಗೋಡ: ಟಿಬೇಟಿಯನ್ ಧರ್ಮಗುರು ದಲೈ ಲಾಮಾರ 90ನೇ ಜನ್ಮ ದಿನ;ಪಟ್ಟಣದ ಟಿಬೇಟಿಯನ್ ಕ್ಯಾಂಪ್ ನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್
ಟಿಬೇಟಿಯನ್ ಧರ್ಮಗುರು, ಶಾಂತಿದೂತ ದಲೈ ಲಾಮಾರ 90ನೇ ಜನ್ಮ ದಿನದ ಅಂಗವಾಗಿ ಮುಂಡಗೋಡದ ಟಿಬೇಟಿಯನ್ ಕ್ಯಾಂಪ್ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ರವಿವಾರ ಮಧ್ಯಾಹ್ನ 12.20ರ ಸುಮಾರು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು ಸಹಾನುಭೂತಿ, ಶಾಂತಿ ಮತ್ತು ಮಾನವೀಯ ಮೌಲ್ಯಗಳ ಸಾರವಾದ ದಲೈ ಲಾಮಾ ಅವರ ಜೀವನ ನಮ್ಮೆಲ್ಲರಿಗೂ ಮಾರ್ಗದೀಪ ಹಾಗೂ ಪ್ರಸ್ತುತ ಸಮಾಜಕ್ಕೆ ಅವರ ಮೌಲ್ಯಗಳನ್ನು ತಲುಪಿಸುವ ಅಗತ್ಯವಿದೆ ಎಂದರು.