ಬೆಳಗಾವಿ: ಬೆಳಗಾವಿಯಲ್ಲಿ ಮಟಕಾ ಅಡ್ಡೆ ಮೇಲೆ ಸಿಸಿಬಿ ದಾಳಿ: 17 ಜನರ ಬಂಧನ, 81,820 ರೂ ಜಪ್ತಿ
ಬೆಳಗಾವಿಯ ವಡಗಾಂವಿ ಮತ್ತು ಕಲ್ಮೇಶ್ವರ ರಸ್ತೆಯಲ್ಲಿ ಮಟಕಾ ಆಟವಾಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. 17 ಮಂದಿಯನ್ನು ಬಂಧಿಸಿ, 81,820 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಶಹಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.