ಬೆಳಗಾವಿ: ವಿಶ್ವ ಸ್ಕೇಟಿಂಗ್ ಗೇಮ್ಸ್ ಚಾಂಪಿಯನ್ಶಿಪ್ಗೆ ಬೆಳಗಾವಿಯ ಇಬ್ಬರು ಯುವಕರ ಆಯ್ಕೆ
ಪರಾಗ್ವೆಯಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ವಿಶ್ವ ಸ್ಕೇಟಿಂಗ್ ಗೇಮ್ಸ್ ಚಾಂಪಿಯನ್ಶಿಪ್ಗೆ ಬೆಳಗಾವಿಯ ದೆವೆನ್ ಬಾಮನೆ ಮತ್ತು ಸಾಯಿರಾಜ ಮೆಂಡಕೆ ಆಯ್ಕೆಯಾಗಿದ್ದಾರೆ. ಫ್ರೀಸ್ಟೈಲ್ ಸ್ಪೀಡ್ ಸ್ಲಾಲಂ ಮತ್ತು ಇನ್ಲೈನ್ ಅಲ್ಪೈನ್ ವಿಭಾಗದಲ್ಲಿ ಇವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.