ಕಡಬ: ಉಪ್ಪಿನಂಗಡಿ: ಹೆದ್ದಾರಿಯಲ್ಲಿ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರ ಬಂಧನ
ಉಪ್ಪಿನಂಗಡಿಯ ಕೌಕ್ರಾಡಿ ಗ್ರಾಮದ ಹೆದ್ದಾರಿಯಲ್ಲಿ ವಾಹನಗಳ ಡೀಸೆಲ್ ಕಳವು ಮಾಡುತ್ತಿದ್ದ ಮಂಡ್ಯ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 20 ಲೀಟರ್ ಡೀಸೆಲ್, ಕೃತ್ಯಕ್ಕೆ ಬಳಸಿದ ಪಿಕ್ ಅಪ್ ವಾಹನ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.