ಹುಬ್ಬಳ್ಳಿ: ಅಪರಿಚಿತ ದ್ವಿಚಕ್ರವಾಹನ ಏಕಮುಖ ರಸ್ತೆಯಲ್ಲಿ ಬಂದು ಎದುರಿಗೆ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟು, ಇನ್ನೊಂಬ ವ್ಯಕ್ತಿ ಗಾಯಗೊಂಡ ಘಟನೆ ತಾಲೂಕಿ ಬಂಡಿವಾಡ ಗ್ರಾಮದ ಹತ್ತಿರ ಗದಗ-ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ. ಬಂಡಿವಾಡ ಗ್ರಾಮದ ಹನುಮಂತಪ್ಪ ಭಜಂತ್ರಿ(೩೫) ಮೃತಪಟ್ಟಿದ್ದು, ಹನುಮಂತಪ್ಪ ಶಿವಪ್ಪ ಭಜಂತ್ರಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾಲಾಜಿ ದಾಬಾ ಹತ್ತಿರ ಹುಬ್ಬಳ್ಳಿ ಕಡೆಯಿಂದ ಗದಗ ಕಡೆ ವೇಗವಾಗಿ ಬಂದ ವಾಹನ ಎದುರಿಗೆ ಬೈಕ್ ಮೇಲೆ ಬರುತ್ತಿದ್ದ ಹನುಮಂತಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಆಗ ಹನುಮಂತಪ್ಪ ಹಾಗೂ ಅವರ ಅಳಿಯ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ನಗರದ ಕೆಎಂಸಿಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್