ಬಂಟ್ವಾಳ: ಸಿದ್ಧಕಟ್ಟೆ: ಕೊಡಂಗೆ ಕಂಬಳ ಗದ್ದೆಯಲ್ಲಿ ಕೋಣಗಳ ತರಬೇತಿಗೆ ಮುಕ್ತ ಅವಕಾಶ
ಸಿದ್ಧಕಟ್ಟೆಯ ಕೊಡಂಗೆ ವೀರ-ವಿಕ್ರಮ ಜೋಡುಕರೆ ಗದ್ದೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಓಟದ ಕೋಣಗಳಿಗೆ ತರಬೇತಿ ನೀಡಲು 'ಕುದಿ ಕಂಬಳ'ಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಂಬಳ ಕರೆಯಲ್ಲಿ ನೀರು ತುಂಬಿಸಿ ಸಕಲ ಸಿದ್ಧತೆ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.