ಕೊಟ್ಟೂರು: ಕೊಟ್ಟೂರಿನಲ್ಲಿ ವಿಜೃಂಭಣೆಯಿಂದ ನಡೆದ ಮಹಾಕಾಳಿಕಾಂಬ ದೇವಿ ಪೂಜೆ ಮತ್ತು ಹೋಮ
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಜೆ.ಪಿ.ನಗರದಲ್ಲಿ ಶ್ರೀ ಓಂ ಬನ್ನಿ ಮಹಾಕಾಳಿಕಾಂಬ ಸೇವಾ ಟ್ರಸ್ಟ್ನಿಂದ ಶರನ್ನವರಾತ್ರಿ ಅಂಗವಾಗಿ ಪುರಾಣ ಪ್ರವಚನ ಹಾಗೂ ಹೋಮದ ಪೂರ್ಣಾವತಿ ಪೂಜೆ ನಡೆಯಿತು. ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.