ರಾಮನಗರ: ಬೆಂಗಳೂರು: ಜಿಬಿಡಿಎ ಕಚೇರಿಗೆ ನಕಲಿ ದಾಖಲೆ ಸಲ್ಲಿಕೆ, 12 ಮಂದಿ ಆರೋಪಿಗಳ ಬಂಧನ
ಬಿಡದಿಯಲ್ಲಿ ಜಿಬಿಡಿಎ ಕಚೇರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಪರಿಹಾರ ಪಡೆಯಲು ಯತ್ನಿಸಿದ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಾರಸುದಾರರಿಲ್ಲದ ಜಮೀನುಗಳ ಹೆಸರಿನಲ್ಲಿ ನಕಲಿ ವಂಶವೃಕ್ಷ ಮತ್ತು ದಾಖಲೆಗಳನ್ನು ಸಿದ್ಧಪಡಿಸಿದ್ದ ಆರೋಪಿಗಳ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.