ಕೊಲ್ಹಾರ: ವಿಜಯಪುರ: ಜಮೀನು ವಿವಾದದಲ್ಲಿ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ, ಇಬ್ಬರ ಹತ್ಯೆ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಜಮೀನು ಲೀಸ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಹನುಮವ್ವ ಮೇಟಿ ಅವರ ಜಮೀನು ಲೀಸ್ ಪಡೆದಿದ್ದ ಸಾಲೋಟಗಿ ಕುಟುಂಬದ ಮೇಲೆ ಸಂಬಂಧಿಕರು ನಡೆಸಿದ ಹಲ್ಲೆಯಲ್ಲಿ ಇಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.