ಬಂಟ್ವಾಳ: 9 ವರ್ಷವಾದರೂ ಪೂರ್ಣಗೊಳ್ಳದ ಪಂಜೆ ಮಂಗೇಶರಾಯರ ಸ್ಮಾರಕ ಭವನ
ಕನ್ನಡ ಸಾಹಿತ್ಯದ ದಿಗ್ಗಜ ಪಂಜೆ ಮಂಗೇಶರಾಯರ ಹುಟ್ಟೂರು ಬಂಟ್ವಾಳದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕ ಭವನ, ಅನುದಾನದ ಕೊರತೆಯಿಂದಾಗಿ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದರೂ ಅನುದಾನದ ನಿರೀಕ್ಷೆಯಲ್ಲಿ ಸಾಹಿತ್ಯಾಸಕ್ತರಿದ್ದಾರೆ.