ಸಕಲೇಶಪುರ: ಹಾಸನದಲ್ಲಿ ಆರಂಭವಾಯ್ತು 'ಕಾಡು ಕೃಷಿಕರ ಪಾಠಶಾಲೆ': ಕೃಷಿ ಕ್ಷೇತ್ರದಲ್ಲಿ ಹೊಸ ಆಂದೋಲನ
ಹಾಸನದ ಸಕಲೇಶಪುರ ತಾಲೂಕಿನ ಹಳ್ಳಿಗದ್ದೆಯಲ್ಲಿ 'ಕಾಡು ಕೃಷಿಕರ ಪಾಠಶಾಲೆ' ಆರಂಭವಾಗಿದೆ. ನೈಸರ್ಗಿಕ ಕೃಷಿ ಪದ್ಧತಿ ಮತ್ತು ಮಣ್ಣು-ನೀರಿನ ಸಂರಕ್ಷಣೆ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಪಾಠಶಾಲೆ ಸ್ಥಾಪನೆಯಾಗಿದೆ. ಡಾ. ಮಳಲಿಗೌಡ ಅವರ ನೇತೃತ್ವದಲ್ಲಿ ಈ ಹೊಸ ಕೃಷಿ ಆಂದೋಲನ ಆರಂಭವಾಗಿದೆ.