ಕನಕಪುರ: ಪಿಂಚಣಿ ಸಮಸ್ಯೆ ತೋಡಿಕೊಂಡ ಅಜ್ಜಿಗೆ ಧೈರ್ಯ ತುಂಬಿದ ನಾಯಕರು
ಕನಕಪುರದ ಚೆನ್ನಬಸಪ್ಪ ಸರ್ಕಲ್ನಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯ ವೇಳೆ, ವೃದ್ಧಾಪ್ಯ ವೇತನ ಸಿಗುತ್ತಿಲ್ಲ ಎಂದು ಅಜ್ಜಿಯೊಬ್ಬರು ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿ ಪಿಂಚಣಿ ಕೊಡಿಸುವುದಾಗಿ ನಾಯಕರು ಭರವಸೆ ನೀಡಿದ್ದಾರೆ.