ಬಳ್ಳಾರಿ: ಬಳ್ಳಾರಿಗೆ ಅಕ್ಟೋಬರ್ 4 ರಂದು ಬರಲಿದೆ ಎನ್ಪಿಎಸ್ ಸಂಚಯ ಯಾತ್ರೆ: ಸಾರ್ವಜನಿಕರಿಗೆ ಸಿಗಲಿದೆ ಮಾಹಿತಿ
ಎನ್ಪಿಎಸ್ ಯೋಜನೆಯ ಮಾಹಿತಿ ನೀಡಲು ಅಕ್ಟೋಬರ್ 4 ರಂದು ಬಳ್ಳಾರಿಗೆ 'ಎನ್ಪಿಎಸ್ ಸಂಚಯ ಯಾತ್ರೆ' ಬರಲಿದೆ. ಸಾರ್ವಜನಿಕರು ಖಾತೆ ತೆರೆಯುವ ವಿಧಾನ ಮತ್ತು ಯೋಜನೆಯ ಪ್ರಯೋಜನಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ಪಡೆಯಬಹುದು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಗಿರೀಶ್ ವಿ. ಕುಲಕರ್ಣಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾರ್ವಜನಿಕರಲ್ಲಿ ಕೋರಿದ್ದಾರೆ.