ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದೆ. ಆಗಸ್ಟ್ 10ರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಯೊಂದಕ್ಕೆ ಕಿಡಿಗೇಡಿ ಯುವಕನೊಬ್ಬ ನುಗ್ಗಿ ದಾಂಧಲೆ ಮಾಡಿದ್ದಾನೆ. ಯುವತಿಯೊಬ್ಬಳು ಮಾಸ್ಕ್ ಧರಿಸಿ ಬಂದು ಲಾಂಗ್ ಬೀಸಿದ ಪುಂಡನ ವರ್ತನೆಗೆ ಬೆಚ್ಚಿ ಬಿದ್ದಿದ್ದಾಳೆ. ಅಂಗಡಿಯ ಲ್ಯಾಪ್ ಟಾಪ್ , ಲೈಟ್ ಎಲ್ಲವನ್ನು ಲಾಂಗ್ ಬೀಸಿ ಒಡೆದು ಹಾಕಿದ್ದಾನೆ. ಸದ್ಯ ಪ್ರಕರಣ ಬಸವನಗುಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.