ಆಗಸ್ಟ್ 11ರ ಬೆಳಗ್ಗೆ 10 ಗಂಟೆವರೆಗೂ ಲಭ್ಯ ಆಗಿರುವಂತಹ ಮಾಹಿತಿ ಪ್ರಕಾರ ಸು ಫ್ರಮ್ ಸೋ ಸಿನಿಮಾ ಬಾಕ್ಸ್ ಆಫೀಸ್ ಧೂಳು ಎಬ್ಬಿಸಿದೆ. ದಿನದಿಂದ ದಿನಕ್ಕೆ ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಸಿನಿಮಾ ಕೇವಲ 16 ದಿನಗಳಲ್ಲಿ 70 ಕೋಟಿಗೂ ಅಧಿಕ ಲಾಭಗಳಿಸಿದೆ ಅನ್ನೋ ಮಾಹಿತಿ ಸಿಕ್ಕಿದೆ. ಡಬಲ್ ಮೀನಿಂಗ್ ಜೋಕ್ ಇಲ್ಲದ ಸಿನಿಮಾ ಕೇವಲ ಪ್ಯೂರ್ ಹಾಸ್ಯದ ಮೂಲಕ ಜನರ ಮನಸ್ಸನ್ನು ಕದ್ದಿದೆ. ನಗೆ ಕಡಲಲ್ಲಿ ತೇಲುಸುತ್ತಿರುವ ಸಿನಿಮಾ ಸಿನಿ ಪ್ರಿಯರ ಮನ ಗೆದ್ದಿದೆ.