ಸಿದ್ಧಾಪುರ: ನೆಟ್ಟಗೋಡಿನ ಹೊಳೆಯಲ್ಲಿ ಶೋಭಾ ಗೌಡ ನಾಪತ್ತೆ: ಮುಳುಗು ತಜ್ಞರಿಂದ ಶೋಧ ಕಾರ್ಯ
ಸಿದ್ದಾಪುರ ತಾಲೂಕಿನ ಬಿರ್ಲಮಕ್ಕಿ ನೆಟ್ಟಗೋಡಿನ ಹೊಳೆಯಲ್ಲಿ 35 ವರ್ಷದ ಶೋಭಾ ಹನುಮಂತ ಗೌಡ ಅವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಅವರ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ 6.30ರವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮಾರಿಕಾಂಬ ಲೈಫ್ ಗಾರ್ಡ್ ತಂಡದ ಮುಳುಗು ತಜ್ಞರು ನೆಟ್ಟಗೋಡ ಹೊಳೆಯಲ್ಲಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಶೋಭಾ ಹನುಮಂತ ಗೌಡ ಅವರ ಪತ್ತೆಗಾಗಿ ಪೊಲೀಸರು ಮತ್ತು ರಕ್ಷಣಾ ತಂಡದವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.