ಸಿದ್ಧಾಪುರ: ಪಟ್ಟಣದ ವಿವಿಧೆಡೆ ಶಾಸಕ ಭೀಮಣ್ಣ ಭೇಟಿ : ಸಾರ್ವಜನಿಕರೊಂದಿಗೆ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ
ಸಿದ್ದಾಪುರ : ಶಾಸಕ ಭೀಮಣ್ಣ ನಾಯ್ಕ ಬುಧವಾರ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಿದರು. ದುರಸ್ತಿ ಆಗದೆ ಇರುವ ಹಾಗೂ ಮರು ದುರಸ್ತಿ ಆಗಬೇಕಿರುವ ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಪೂರೈಕೆ ಮತ್ತು ಚರಂಡಿ ವ್ಯವಸ್ಥೆಗಳಂತಹ ಸಾರ್ವಜನಿಕ ಸೇವೆಗಳ ಕುರಿತು ಗಮನಹರಿಸುವುದರ ಜೊತೆಗೆ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.