ಸಿದ್ಧಾಪುರ: ರಸ್ತೆಯ ಹೊಂಡ ಮುಚ್ಚಲು ಸಹ ಕಳಪೆ ಕಾಮಗಾರಿ ಬಿಜೆಪಿ ಕಚೇರಿಯಲ್ಲಿ ಸಿದ್ದಾಪುರ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಸುದ್ದಿಗೋಷ್ಠಿ
ಬುಧವಾರ ಸಂಜೆ 4ಕ್ಕೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದಾಪುರ ಮಂಡಳ ಅಧ್ಯಕ್ಷ ಎಂ. ಕೆ. ತಿಮ್ಮಪ್ಪ ಅವರು ರಸ್ತೆಯಲ್ಲಿನ ಹೊಂಡವನ್ನು ಮುಚ್ಚಲು ಗುತ್ತಿಗೆದಾರರು ಅಧಿಕಾರಿಗಳು ಟ್ರ್ಯಾಕ್ಟರ್ ನಲ್ಲಿ ಡಾಂಬರ್ ಮಿಕ್ಸ್ ಮಾಡಿದ ಜಲ್ಲಿಯನ್ನು ತುಂಬಿಕೊಂಡು ಅವರಿಗೆ ಬೇಕಾದಲ್ಲಿ ಮುಚ್ಚಿ ಫೋಟೋ ತೆಗೆದು ಉಳಿದ ಹೊಂಡಗಳಿಗೆ ಕೇವಲ ಜೆಲ್ಲಿಪುಡಿ ಹಾಕಿದ್ದಾರೆ. ಈಗ ಮಳೆ ಬಿದ್ದ ಸಂದರ್ಭದಲ್ಲಿ ರಸ್ತೆ ಮತ್ತೆ ಹಾಳಾಗಿದೆ. ನಿರ್ವಹಣೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿ ನಡೆದಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ದಿವಾಕರ ನಾಯ್ಕ, ಜಿ.ಕೆ. ನಾಯ್ಕ,ಈರಪ್ಪ ನಾಯ್ಕ, ವೆಂಕಟೇಶ ಹೊಸೂರ್, ಎ ಜಿ ನಾಯ್ಕ ಇದ್ದರು.