ಶಿರಸಿ: ನಗರದ ರಂಗಧಾಮದಲ್ಲಿ 'ಸುಭಾಷ್ ಚಂದ್ರ ಬೋಸ್ ಕಾರ್ಯಪಡೆ' ಲಾಂಛನ ಬಿಡುಗಡೆ
ಶಿರಸಿಯ ರಂಗಧಾಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ‘ಸುಭಾಷ್ ಚಂದ್ರ ಬೋಸ್ ಕಾರ್ಯಪಡೆಯ ಲಾಂಛನವನ್ನು ವಿದ್ಯಾನಗರ ರುದ್ರಭೂಮಿ ಸಮಿತಿ ಸದಸ್ಯರು ರವಿವಾರ ಸಂಜೆ 5 ಕ್ಕೆ ಬಿಡುಗಡೆಗೊಳಿಸಿದರು. ಶ್ರಮಸೇವೆಗೆ ರಾಜ್ಯವ್ಯಾಪಿಯಾಗಿ ಹೆಸರುವಾಸಿಯಾದ ಈ ಸಂಸ್ಥೆ, ಕಳೆದ ಹಲವು ವರ್ಷಗಳಿಂದ ಪ್ರತಿ ರವಿವಾರ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ರುದ್ರಭೂಮಿಯಲ್ಲಿ ಶ್ರಮಸೇವೆ ನಡೆಸುತ್ತಿದೆ. ಈ ನಿಸ್ವಾರ್ಥ ಸೇವೆಯು ಇತರ ಅನೇಕ ಸ್ವಯಂಸೇವಾ ಸಂಸ್ಥೆಗಳ ಸ್ವಯಂಸೇವಕರಿಗೂ ಮಾದರಿಯಾಗಿ ಪರಿಣಮಿಸಿದೆ. ಕಾರ್ಯಕ್ರಮದಲ್ಲಿ 'ಸುಭಾಷ್ ಚಂದ್ರ ಬೋಸ್ ಕಾರ್ಯಪಡೆ' ಸದಸ್ಯರ ಕುಟುಂಬದವರು ಹಾಜರಿದ್ದರು. ಕುಟುಂಬದವರಿಂದ ಮನೋರಂಜನಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು.