ಶಿರಸಿ: ನಗರದ ಸುಪ್ರೀಯಾ ಇಂಟರ್‌ನ್ಯಾಷನಲ್‌ನಲ್ಲಿ 'ಮರೆಯಲಾರೆ ನಿನ್ನ ನೀರೆ' ಮಧುರ ಗೀತೆಗಳ ಕಾರ್ಯಕ್ರಮ
ಶಿರಸಿ: ಮಲೆನಾಡಿನ ಮಳೆಗಾಲದಲ್ಲಿ ಬೆಚ್ಚನೆಯ ಭಾವನೆಗಳ ಮೆಹಫಿಲ್ "ಮರೆಯಲಾರೆ ನಿನ್ನ ನೀರೆ" ಮಧುರ ಗೀತೆಗಳ ಕಾರ್ಯಕ್ರಮ ನಗರದ ಸುಪ್ರೀಯಾ ಇಂಟರನ್ಯಾಶನಲ್ ನಲ್ಲಿ ಸಂಗೀತ ಪ್ರಿಯರನ್ನು ಆಪ್ತವಾಗಿ ಗಮನ ಸೆಳೆಯಿತು. ಮಧುರವಾದ ಭಾವಗೀತೆಗಳು, ಆಯ್ದ ಗಝಲ್ ಗಳು ಹಾಗೂ ಹಳೆಯ ಹಿಂದಿ ಮಧುರ ಚಿತ್ರಗೀತೆಗಳ ಮೂಲಕ ಮರೆಯಲಾರೆ ನಿನ್ನ ನೀರೆ ಕಾರ್ಯಕ್ರಮ ಪ್ರೇಕ್ಷಕರಿಗೆ ಪ್ರಸಿದ್ಧ ಗಾಯಕ ರವಿ ಮೂರುರು ಉಣಬಡಿಸಿದ ರೀತಿ ಮೆಚ್ಚುಗೆಗೆ ಕಾರಣವಾಯಿತು. ಶ್ರೀಧರ ಸ್ವಾಮಿಗಳ ಸ್ಮರಣೆಯ ಗೀತೆಯೊಂದಿಗೆ ಪ್ರಸ್ತುತಗೊಳಿಸಿದ ರವಿ, ಮತ್ತದೇ ಬೇಸರ ಹಾಡನ್ನು ಹಾಡಿ ಮರೆಯಲಾರೆ ಎಂಬ ಗಾನ ಸಂಭ್ರಮಕ್ಕೆ ಚಾಲನೆ ನೀಡಿದರು. ಸಹ ಕಲಾವಿದರಾಗಿ ಕೀಬೋರ್ಡನಲ್ಲಿ ಮೆಲ್ವಿನ್ ಲೀಮಾ, ಗಿಟಾರ್ ನಲ್ಲಿ ಕರಣ್ ಜೈನ್ ಭಾಗವಹಿಸಿದ್ದರು.